ಕಾರ್ಯಕ್ರಮ ವೇಳಾಪಟಲ ಪುಟ

ಒಂದು ಕನ್ನಡ ಕೂಟ ನಿಮಗೆಲ್ಲ ಎರಡು ದಿನಗಳ ಅದ್ಧೂರಿ ಕಾರ್ಯಕ್ರಮಗಳ ಸರಣಿಯನ್ನು ಮೂರು ವೇದಿಕೆಗಳ ಮೇಲೆ ಅವಿರತವಾಗಿ ನಡೆಸುವ ಯೋಜನೆಯನ್ನು ಹೊಂದಿದೆ!

Saturday & Sunday
ಕನ್ನಡ ಕೂಟದ ಸದಸ್ಯರು, ತನ್ನ 12ಕ್ಕೂ ಹೆಚ್ಚಿನ ಅಂಗ ಸಂಸ್ಥೆಗಳ ಜೊತೆ, ಕರ್ನಾಟಕದ ಸಂಸ್ಕೃತಿಯ ಪ್ರತೀಕವಾದ ಜಾನಪದ ಕುಣಿತಗಳಿಂದ, ಕನ್ನಡತನದ ತೇರನ್ನು ಎಳೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ನಂತರ ಮುಖ್ಯ ವೇದಿಕೆಯ ಮೇಲೆ ಗಣ್ಯರೆಲ್ಲ ಸೇರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ
ಇಡೀ ದಿನ ಮನರಂಜನೆಯ ಕಾರ್ಯಕ್ರಮಗಳು ಒಳಾಂಗಣ ಹಾಗು ಹೊರಾಂಗಣ ವೇದಿಕೆಯ ಮೇಲೆ ನಡೆಯಲಿದೆ.
ಸಾಹಿತ್ಯಿಕ ಸಂವಾದ, ಉಪನ್ಯಾಸ, ಮಹಿಳಾ ಬಂಧ, ವಧು-ವರಾನ್ವೇಷಣೆ, ಕಲಾತ್ಮಕ ಸ್ಪರ್ಧೆಗಳು, ಇತ್ಯಾದಿ ಕಾರ್ಯಕ್ರಮಗಳು ಎರಡನೆಯ ವೇದಿಕೆಯ ಮೇಲೆ ನಡೆಯಲಿದೆ.
ಎರಡೂ ದಿನಗಳೂ ನಮ್ಮ ಸ್ಥಳೀಯ ಪ್ರತಿಭೆಗಳಿಂದ ಅದ್ಧೂರಿ ಕಾರ್ಯಕ್ರಮಗಳ ಸರಣಿ ನಿಮ್ಮೆಲ್ಲರನ್ನು ರಂಜಿಸುವುದು ನಿಶ್ಚಿತ!
ಭಾರತದಿಂದ ಬರುತ್ತಿರುವ ರಘು ದೀಕ್ಷಿತ್, ರವಿಚಂದ್ರನ್, ಡಾಲಿ ಧನಂಜಯ, ಇತ್ಯಾದಿ ಪ್ರತಿಭಾನ್ವಿತ ಕಲಾವಿದರು ನಮ್ಮೆಲ್ಲರ ಸ್ಮೃತಿ ಪಟಲದಲ್ಲಿ ಅಚ್ಚಾಗುವಂತಹ ಸಿಹಿ ನೆನಪುಗಳನ್ನು ರಚಿಸಿ ಕೊಡುವುದು ಖಂಡಿತ!
ಇಷ್ಟೆಲ್ಲಾ ಸುಖಾನುಭವ ಎರಡೇ ದಿನದಲ್ಲಿ ಮುಗಿದು ಹೋಗುವುದಲ್ಲ ಎನ್ನುವ ಬೇಸರ ನಿಮಗೆಲ್ಲ ಆಗೇ ಆಗುತ್ತದೆ! ಅಷ್ಟೊಂದು ಕಾರ್ಯಕ್ರಮಗಳು ನಿಮಗಾಗಿ ತರುತ್ತಿದೆ ನಮ್ಮ ಸಮಿತಿ.
ಇನ್ನಷ್ಟು ಕಾರ್ಯಕ್ರಮದ ವಿವರಗಳು ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ..
Day 1 Event Schedule
.jpg)
Day 2 Event Schedule
.jpg)